ಬಿಗ್ ಬೆನ್
ಬಿಗ್ ಬೆನ್ ಎಂಬುದು ಲಂಡನ್‌ನ್ನಿನ ವೆಸ್ಟ್‌ಮಿನ್‌ಸ್ಟರ್ ಅರಮನೆಯ ಉತ್ತರ ದಿಕ್ಕಿನ ಕೊನೆಯಲ್ಲಿರುವ ದೊಡ್ಡ ಗಂಟೆಯುಳ್ಳ ಗಡಿಯಾರಕ್ಕೆ ನೀಡಲಾದ ಉಪನಾಮ ಅಥವಾ ಸಂಕ್ಷಿಪ್ತ ಅಡ್ಡ ಹೆಸರು. ಅಲ್ಲದೇ ಇದು ಸಾಮಾನ್ಯವಾಗಿ ಗಡಿಯಾರ ಅಥವಾ ಗಡಿಯಾರದ ಗೋಪುರವೆಂದೂ ಸಹ ಸೂಚಿಸಲ್ಪಡುತ್ತದೆ. ಕೆಲವರು ಈ ಅರ್ಥ ವಿಸ್ತರಣೆಯನ್ನು ಅಶುದ್ಧವೆಂದು ಪರಿಗಣಿಸುತ್ತಾರೆ, ಆದರೆ ಇದೀಗ ಇದನ್ನು ಸಂಪೂರ್ಣವಾಗಿ ದೈನಂದಿನ ಬಳಕೆಯಲ್ಲಿ ತರಲಾಗುತ್ತದೆ. ಇದು ನಾಲ್ಕು ಮುಖದ ಅತ್ಯಧಿಕ ಪ್ರಮಾಣದಲ್ಲಿ ಘಂಟಾ ನಾದ ಹೊರಡಿಸುವ ಗಡಿಯಾರವಾಗಿದ್ದು, ವಿಶ್ವದ ಮೂರನೇ-ಅತ್ಯಂತ ದೊಡ್ಡದು ಎನ್ನಲಾದ, ಪ್ರತ್ಯೇಕ ಗಡಿಯಾರ ಗೋಪುರವಾಗಿದೆ. ಇದು ಮೇ ೨೦೦೯ರಲ್ಲಿ ತನ್ನ ೧೫೦ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು. ಈ ಸಂದರ್ಭದಲ್ಲಿ ಹಲವಾರು ಸಮಾರಂಭಗಳು ಏರ್ಪಟ್ಟಿದ್ದವು. ಗಡಿಯಾರದ ನಿರ್ಮಾಣ ಕಾರ್ಯವು ಏಪ್ರಿಲ್ ೧೦, ೧೮೫೮ರಲ್ಲಿ ಮುಕ್ತಾಯಗೊಂಡು ಆಗ ಅದು ಕಾರ್ಯತತ್ಪರವಾಯಿತು.
Read article